ಅಂತರಪಟವು ಭಾರತೀಯ ಕನ್ನಡ ಭಾಷೆಯ ದೈನಂದಿನ ದೂರದರ್ಶನ ಧಾರಾವಾಹಿಯಾಗಿದ್ದು , ಇದು ೨೪ ಏಪ್ರಿಲ್ ೨೦೨೩ ರಂದು ಕಲರ್ಸ್ ಕನ್ನಡದಲ್ಲಿ ಪ್ರಥಮ ಪ್ರದರ್ಶನಗೊಂಡಿತು . ಮುಖ್ಯ ಭೂಮಿಕೆಯಲ್ಲಿ ತನ್ವಿ ಬಾಲಾರಾಜ್ ಮತ್ತು ಚಂದನ್ ಗೌಡ ನಟಿಸಿದ್ದಾರೆ . == ಕಥಾವಸ್ತು == ಕಥಾ ನಾಯಕಿ ಆರಾಧನಾ ಬಡ ಕುಟುಂಬಕ್ಕೆ ಸೇರಿದ ಅತ್ಯಂತ ಸರಳ ವ್ಯಕ್ತಿತ್ವದ ಹುಡುಗಿಯಾಗಿದ್ದಾಳೆ. ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ತನ್ನ ಸಂಸಾರವನ್ನು ಸುಖವಾಗಿಡಲು ಅರೆಕಾಲಿಕ ಉದ್ಯೋಗದ ಕನಸು ಕಾಣುತ್ತಾಳೆ. ಅವಳು ತನ್ನ ಕುಡುಕ ಮಲ ತಂದೆ ಮಹೇಶ್ ಮತ್ತು ಅವಳ ತಾಯಿ ರೇವತಿ ಜೊತೆ ವಾಸ ಮಾಡುತ್ತ ಇರುತ್ತಾಳೆ. ಬೇಜವಬ್ದಾರಿ ಹುಡುಗ ಸುಶಾಂತ್‌ನನ್ನು ಅವನ ತಂದೆ ಮನೆಯಿಂದ ಹೊರಹಾಕುತ್ತಾನೆ. ತಂದೆಯ ಆಸ್ತಿಯನ್ನು ಆನಂದಿಸುವ ಬದಲು ಸ್ವತಃ ಕೆಲಸ ಮಾಡಿ ಹಣ ಸಂಪಾದಿಸುವಂತೆ ಹೇಳುತ್ತಾನೆ. . ಸುಶಾಂತ್ ಆರಾಧನಾಳನ್ನು ಭೇಟಿಯಾಗುತ್ತಾನೆ . ಅವಳಿಗೆ ಕೆಲಸ ಹುಡುಕಲು ಸಹಾಯ ಮಾಡಲು ಪ್ರಯತ್ನಿಸುತ್ತಾನೆ. ಆರಾಧನಾಳ ಮದುವೆಯನ್ನು ಸುಶಾಂತ್ ಕಳ್ಳನೆಂದು ತಿಳಿದ ಒಬ್ಬ ಕುಡುಕನೊಂದಿಗೆ ಅವಳ ತಂದೆ ಏರ್ಪಡಿಸುತ್ತಾನೆ. ಆರಾಧನಾ ಮದುವೆಯಿಂದ ತಪ್ಪಿಸಿಕೊಳ್ಳಲು ಬಯಸುತ್ತಾಳೆ, ಆದರೆ ಅವಳು ಸಿಕ್ಕಿಬಿದ್ದಿದ್ದಾಳೆ. ಜ್ಯೋತಿಷಿಯೊಬ್ಬರು ಮದುವೆಯನ್ನು ಮುಂದುವರಿಸಲು ಸಲಹೆ ನೀಡುತ್ತಾರೆ. ಮದುವೆಯ ಮಂಟಪದಲ್ಲಿ, ಆರಾಧನಾ ಮತ್ತು ಸುಶಾಂತ್ ಅವರ ಜೀವನವನ್ನು ಅಂತರಪಟವು ಹೇಗೆ ಬದಲಾಯಿಸುತ್ತದೆ ಎಂಬುದು ಕಥಾ ಹಂದರ ಆಗಿದೆ. == ಪಾತ್ರವರ್ಗ == ==== ಮುಖ್ಯ ಪಾತ್ರಗಳು ==== ತನ್ವಿ ಬಾಲರಾಜ್ : ಕಥಾ ನಾಯಕಿ ಆರಾಧನಾಳಾಗಿ, ಸುಶಾಂತ್ ಹೆಂಡಿತಿಯಾಗಿ. ರೇವತಿ ಸ್ವಂತ ಮಗಳು ಮತ್ತು ಮಹೇಶ್ ಮಲ ಮಗಳಾಗಿ. ಚಂದನ್ ಗೌಡ: ಕಥಾ ನಾಯಕ ಸುಶಾಂತ್ ಆಗಿ, ಆರಾಧನಾಳ ಗಂಡನಾಗಿ. ==== ಪೋಷಕ ಪಾತ್ರಗಳಲ್ಲಿ ==== ಮಂಜು ಪಾವಗಡ : ಮಹೇಶ್‌ನಾಗಿ, ಆರಾಧನಾಳ ಮಲ ತಂದೆಯಾಗಿ ಜ್ಯೋತಿ ಕಿರಣ್: ರೇವತಿಯಾಗಿ, ಆರಾಧನಾಳ ತಾಯಿಯಾಗಿ ಪ್ರತಿಮಾ: ಸಿರಿ ಪಾತ್ರದಲ್ಲಿ. ರೇವತಿ ಹಾಗೂ ಮಹೇಶ್‌ನ ಸ್ವಂತ ಮಗಳಾಗಿ. ಆರಾಧನಾಳಾ ಮಲ ತಂಗಿಯಾಗಿ. ಶರ್ಮಿಳಾ ಚಂದ್ರಶೇಖರ್: ಅಮಲಾ ಪಾತ್ರದಲ್ಲಿ. ಸುಶಾಂತ್ ಅಕ್ಕನಾಗಿ ವಿಠ್ಠಲ್ ಕಾಮತ್ : ಸಂದೀಪ್ ಪಾತ್ರದಲ್ಲಿ. ಅಮಲಾ ಪತಿಯಾಗಿ. ===== ವಿಶೇಷ ಪಾತ್ರದಲ್ಲಿ ===== ಕಾರ್ತಿಕ್ ಮಹೇಶ್: ರವಿ ಪಾತ್ರದಲ್ಲಿ, ಆರಾಧನಾ ಸ್ನೇಹಿತನಾಗಿ. ದೀಪಿಕಾ ದಾಸ್: ಸಮೀರಾ ಪಾತ್ರದಲ್ಲಿ. ಪ್ರತಿಷ್ಠಿತ ವೆಡ್ಡಿಂಗ್ ಪ್ಲಾನಿಂಗ್ ಕಂಪೆನಿಯ ಬಾಸ್ ಪಾತ್ರದಲ್ಲಿ. == ನಿರ್ಮಾಣ == ಈ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ಸ್ವಪ್ನಾ ಕೃಷ್ಣ ಅವರ ಮೊದಲ ನಿರ್ಮಾಣವಗಿದೆ. ಮೊದಲ ಪ್ರೋಮೋವನ್ನು 14 ಜನವರಿ 2023 ರಂದು ಪ್ರಸಾರ ಮಾಡಲಾಯಿತು. 24 ಏಪ್ರಿಲ್ 2023 ರಿಂದ ರಾತ್ರಿ 8:30ಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಪ್ರಾರಂಭ ಮಾಡಿತು . == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಪಟ @ ಐ ಎಮ್ ಡಿ ಬಿ